
ನೆನಪಿನೋಕುಳಿ-9 ಛೋಟಾಬಾಂಬೆ
ಶ್ರೀಮತಿ ಸಂಗೀತ ಚಚಡಿಯವರು ಬರೆದ ಛೋಟಾಬಾಂಬೆ, ಜೂನ್,26 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ
ಶ್ರೀಮತಿ ಸಂಗೀತ ಚಚಡಿಯವರು ಬರೆದ ಛೋಟಾಬಾಂಬೆ, ಜೂನ್,26 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ
ನಲವತ್ತು ನಲವತ್ತೈದು ವರ್ಷದ ಹಿಂದಿನ ಧಾರವಾಡ ಲೇಖನದಲ್ಲಿ ಶ್ರೀಯುತ ಗೋಪಾಲಕೃಷ್ಣ ಅಣ್ಣಪ್ಪ ಹಂಪಿಹೊಳಿ ಇವರು ಧಾರವಾಡದ ಹೊಸಯಲ್ಲಾಪುರ ಸುತ್ತ ಮುತ್ತ ಇರುವ ಎಲ್ಲಾ ಗುಡಿ ಗುಂಡಾರ ಹಾಗೇ ತಮ್ಮ ಹಳೆಯ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಜೂನ್ 19, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಹುಬ್ಬಳ್ಳಿ ಒಂದು ಕಥೆ ವ್ಯಥೆ ಎಂಬ ಲೇಖನದಲ್ಲಿ ಶ್ರೀ. ರತ್ನಾಕರ ಕುಲಕರ್ಣಿ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಹುಬ್ಬಳ್ಳಿ ಮತ್ತು ಈಗಿನ ಬೆಳದ ಹುಬ್ಬಳ್ಳಿಗೆ ಎಷ್ಟೊಂದು ವ್ಯತ್ಯಾಸ ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಾವು ಸವಿದ ಆ ಸಂತೋಷಮಯ ಕ್ಷಣಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ತಮ್ಮ ಅನುಭವಗಳನ್ನು ತಮ್ಮ ಧ್ವನಿಯಲ್ಲಿಯೇ ವಾಚನ ಮಾಡುವ ಮೂಲಕ ವ್ಯಕ್ತ ಪಡಿಸಿದ್ದಾರೆ. ಜೂನ್ 12, 2019 ರ ಸಂಚಿಕೆ.
ಧಾರವಾಡದ ಕುರಿತು ಶ್ರೀ. ವಿಜಯ ಇನಾಮದಾರ ಅವರು ಬಹಳ ಸುಂದರವಾಗಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಇಲ್ಲಿನ ಗುಡಿಗಳು, ಮಠಗಳು ಮತ್ತು ಮಂದಿರಗಳ ಸಾಕಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಬರೆದಿದ್ದರೆ ಮತ್ತು ಈ ಲೇಖನವನ್ನು ತಮ್ಮ ಧ್ವನಿಯಲ್ಲಿ ವಾಚಿಸಿದ್ದಾರೆ. ಜೂನ್ 5, 2019 ರ ಸಂಚಿಕೆ
ಈ ಲೇಖನದಲ್ಲಿ ಡಾ. ದೀಪ ಜೋಶಿ ಅವರು ಧಾರವಾಡದಲ್ಲಿ ಅವರು ಕಂಡ ಮೂರು ತಲಿಮಾರಿನ ಕುಟುಂಬದ ಬಗ್ಗೆ ಬಹಳ ಸೊಗಸಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಶ್ರೀಮತಿ. ಮಾಲತಿ ಮುದಕವಿ ಅವರು ವಾಚಿಸಿದ್ದಾರೆ. ಮೇ 29, 2019 ರ ಸಂಚಿಕೆ
ಹುಬ್ಬಳ್ಳಿ ಧಾರಾವಾಡದೊಳಗೆ ಒಂದು ಮೂವತ್ತು ವರ್ಷದ ಹಿಂದೆ.. ನಳ ಬಂದರೆ, ಜನರಲ್ಲಿ ಬರುವ ಉತ್ಸಾಹ.. ನೀರು ತುಂಬುವ ಬಗೆ.. ನೀರು ಬಾರದೆ ಹೋದರೆ ಆಗುವ ತೊಂದರೆಗಳ ಕುರಿತು ಈ ಸಂಚಿಕೆಯಲ್ಲಿ ಬಹಳ ಸುಂದರವಾಗಿ ಹೇಳಲಾಗಿದೆ. ಈ ಲೇಖನದ ವಚನವನ್ನು ಲೇಖಕರಾದ ಶ್ರೀ. ಪ್ರಶಾಂತ ಆಡೂರ ವಾಚಿಸಿದ್ದಾರೆ. ಮೇ 22, 2019 ರ ಸಂಚಿಕೆ