• Home
  • keyboard_arrow_right EHY
  • keyboard_arrow_rightPodcasts
  • keyboard_arrow_right
  • keyboard_arrow_right ಇ-ಹಾಡು ಯಾರಿಗಾಗಿ – ಕಂತು ೧

EHY

ಇ-ಹಾಡು ಯಾರಿಗಾಗಿ – ಕಂತು ೧

ಕಾಂಚನ್ ಸುರೇಶ್ March 3, 2019 89 1


Background
share close

E-Haadu Yaarigaagi with RJ Kanchan

E-Haadu Yaarigaagi – Episode 1

Tagged as: .

Rate it
Avatar
Author

ಕಾಂಚನ್ ಸುರೇಶ್

ಈ ಹಾಡು ಯಾರಿಗಾಗಿ ಕಾರ್ಯಕ್ರಮ ನಿರೂಪಣೆಯ ಮೂಲಕ ನಿಮಗೆ ರೇಡಿಯೋಗಿರ್ಮಿಟ್ ನಲ್ಲಿ ಪರಿಚಯವಾಗ್ತಾ ಇರೋ ಕಾಂಚನ್ ಸುರೇಶ್ ಕರ್ನಾಟಕದ ಹಲವು ಊರುಗಳಲ್ಲಿ ಬೆಳೆದು ಬೆಂಗಳೂರಿನಲ್ಲಿ ಓದಿ ಪದವಿಗಳನ್ನ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಶಿಕ್ಷಣದಲ್ಲಿ ಬಂಗಾರದ ಪದಕ ಪಡೆದು, ಉನ್ನತ ವ್ಯಾಸಂಗಕ್ಕೆ ಅಮೇರಿಕಾ ದೇಶಕ್ಕೆ ಪ್ರಯಾಣಿಸಿದ ಕಾಂಚನ್, ಬೆಂಗಳೂರಿನಲ್ಲಿದ್ದಾಗ ಆಲ್ ಇಂಡಿಯಾ ರೇಡಿಯೋ ಬೆಂಗಳೂರು ಕೇಂದ್ರದಲ್ಲಿ ಅನೌನ್ಸರ್ ಆಗಿ ಆಯ್ಕೆಯಾಗಿ ಪರಿಣತಿ ಪಡೆದಿದ್ದವರು. ಹದಿವಯಸ್ಸಿನಲ್ಲಿ ಇವರು ರಚಿಸಿರೋ ಕವನಗಳು, "ಕವನ ಕಾಂಚನ" ಪುಸ್ತಕರೂಪದಲ್ಲಿ ಪ್ರಕಟಗೊಂಡಿದೆ. ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದಲ್ಲಿ ನಡೆದ ಆರನೇ ಅಕ್ಕ ಸಮ್ಮೇಳನದಲ್ಲಿ ಇವರು ಅತಿಥಿ ಪರಿಚಯ ಕಾರ್ಯಕ್ರಮಗಳ ನಿರೂಪಣೆ ಮಾಡಿ ಸಭಿಕರ ಮೆಚ್ಚುಗೆ ಪಡೆದಿದ್ದರು. ರೇಡಿಯೋಗಿರ್ಮಿಟ್ ಅಂತರ್ಜಾಲ ರೇಡಿಯೋ ನಲ್ಲಿ ಹಲವು ವರ್ಷಗಳಿಂದ ಈ ಹಾಡು ಯಾರಿಗಾಗಿ ಕಾರ್ಯಕ್ರಮವನ್ನ ನಡೆಸಿ ಕೊಡ್ತಾ ಇರೋ ಕಾಂಚನ್ ಗೆ ಈ ಕಾರ್ಯಕ್ರಮದ ಮೂಲಕ ಪ್ರಪಂಚದ ಹತ್ತು ಹಲವು ದೇಶಗಳಿಂದ ಮೆಚ್ಚುಗೆ ಪಾತ್ರಗಳು, ಅಭಿಮಾನ ತುಂಬಿದ ಸ್ನೇಹದ ಹಸ್ತಗಳು ಕೈಕುಲುಕಿವೆ. ಈ ಹಾಡು ಯಾರಿಗಾಗಿ ಕಾರ್ಯಕ್ರಮ ನೀವಿನ್ನು ಕೇಳಿಲ್ಲವಾದರೆ ಖಂಡಿತ archives ಕೇಳಿ. "Kanchan Pens..." ಅನ್ನೋ ಬ್ಲಾಗ್ನಲ್ಲಿ ತಮ್ಮ ಆಲೋಚನೆ ಮನದ ಮಾತುಗಳನ್ನ ಬರೆಯೋ ಕಾಂಚನ್ ಇಬ್ಬರು ಹೆಣ್ಣುಮಕ್ಕಳು, ಒಂದು ನಾಯಿಮರಿ, ಒಂದು ನೀಲಿ ಮೀನು ಹಾಗು ಪತಿ ಸುರೇಶ್ ಅವರೊಂದಿಗೆ ನಾರ್ತ್ ಕರೋಲಿನಾ ರಾಜ್ಯದಲ್ಲಿ ನೆಲೆಸಿದ್ದಾರೆ. ಕಾಂಚನ್ ಅವರ ಸಂಪರ್ಕ ಸೇತುವೆ : kanchan@radiogirmit.com

list Archive

Post comments

This post currently has no comments.

This site uses Akismet to reduce spam. Learn how your comment data is processed.