• Home
  • keyboard_arrow_rightPodcasts

Podcasts

28 Series


Background

ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆ ಮಾತಿನ ಹಾಗೆ, ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಶ್ರೀ. ವಿವೇಕ್ ಕಾತರಕಿ ಇವರು ನಡೆಸುವ ಕಾರ್ಯಕ್ರಮ.

Series

Katha Sagar

ಕಥಾ ಸಾಗರ - ಭಿನ್ನ ವಿಭಿನ್ನ ಕಥೆಗಳನ್ನು ಹಲವಾರು ಲೇಖಕರ ಕಥಾ ಸಂಕಲನದಿಂದ ಈ ಕಾರ್ಯಕ್ರಮದಲ್ಲಿ ಶ್ರೀ. ವಿದ್ಯಾಸಾಗರ್ ದೀಕ್ಷಿತ್ ಅವರು ವಾಚನ ಮಾಡಿದ್ದಾರೆ.

Series

Nage Girmit

ನಗೆ ಗಿರ್ಮಿಟ್ - ಹಾಸ್ಯ ಪ್ರಸಂಗಗಳು ಪ್ರತೀ ಸನ್ನಿವೇಶಗಳಲ್ಲಿ ನಮಗೆ ಸಿಗಬಹುದು ಎಂಬುದನ್ನು ಶ್ರೀ. ಅಶೋಕ್ ಜೋಶಿ ಅವರು ತಮ್ಮ ಮನಮೋಹಕರ ಹಾಸ್ಯ ಭಾವದಿಂದ ಈ ಕಾರ್ಯಕ್ರಮದಲ್ಲಿ ನಗೆಯಿಂದ ತೇಲಿಸಿದ್ದಾರೆ.

ಇದೊಂದು ಸಹಜ ಹರಟೆ ಕಾರ್ಯಕ್ರಮವಾಗಿದ್ದು, ಸಮಾಜದಲ್ಲಿ ಬರುವ ಸನ್ನಿವೇಶಗಳನ್ನು ಇಟ್ಟುಕೊಂಡು, ಜನ ಸಮೂಹಕ್ಕೆ ಒಂದು ಪ್ರಸ್ತುತ ಪರಿಸ್ಥಿತಿಯ ಕುರಿತ ಅರಿವನ್ನು ಬಹಳ ಸಹಜತೆ ಮತ್ತು ಹಾಸ್ಯ ಭರಿತವಾಗಿ ತಲುಪಿಸುವ ಉದ್ದೇಶದಿಂದ ಮೂಡಿಬರುವ ಕಾರ್ಯಕ್ರಮ. ಶ್ರೀಮತಿ. ಉಮಾ ಭಾತಖಂಡೆ ಮತ್ತು ಶ್ರೀ. ಅಶೋಕ ಜೋಶಿ ಅವರು ನಡೆಸಿಕೊಡುತ್ತಿದ್ದಾರೆ.

Series

Eleyara Loka

ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಮಕ್ಕಳಿಂದಲೇ ನಡೆಯುವಂತಹ ವಿವಿಧ ಬಗೆಯ ಕಾರ್ಯಕ್ರಮ.

Series

Nenapinangala

ನಮ್ಮ ಭಾರತ ದೇಶದಲ್ಲಿ ಹಲವಾರು ವ್ಯಕ್ತಿಗಳು ಎಷ್ಟೋ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಯಶಸ್ವಿ ವ್ಯಕ್ತಿಗಳೆನಿಸಿದ್ದಾರೆ. ಸ್ವಾತಂತ್ರ ಚಳುವಳಿ, ಶಿಕ್ಷಣಗ್ಗೋಸ್ಕರ, ಸಮಾಜ ಸುಧಾರಣೆ, ಆರ್ಥಿಕ ಬೆಳವಣಿಗೆ ಇಂತಹ ಇನ್ನೂ ಮುಂತಾದ ಕ್ಷೇತ್ರಗಳಲ್ಲಿನ ಸಾಧನೆಗಳು ಮತ್ತು ಅಂತಹ ವ್ಯಕ್ತಿಗಳನ್ನು ನೆನೆಯುತ್ತ, ನೆನಪಿನಂಗಳ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವುದು.

Series

Paaka Mandira

ವಿವಿಧ ಬಗೆಯ ರುಚಿಕರ, ಸ್ವಾದ ಭರಿತ ತಿಂಡಿ ತಿನಿಸುಗಳ ಮತ್ತು ಅಡುಗೆ ಕಾರ್ಯಕ್ರಮ.

ಕರ್ನಾಟಕದ ವಿವಿಧ ಜಾನಪದ ಕಲಾಪ್ರಕಾರಗಳ ಕುರಿತ ಕಾರ್ಯಕ್ರಮ ಉದಾಹರಣೆ:ಕಂಸಾಳೆ, ಡೊಳ್ಳುಕುಣಿತ, ಹೆಜ್ಜೆ ಮೇಳ, ಕರಡಿ ಮಜಲು, ಹುಲಿ ಕುಣಿತ ಮುಂತಾದವು.

Series

Dani Payana

ಈ ದನಿಪಯಣದ ಪ್ರತೀ ಸಂಚಿಕೆಯು ಕರ್ನಾಟಕದ ಒಂದು ಐತಿಹಾಸಿಕ ಸ್ಥಳದ ಬಗ್ಗೆ ಇರುತ್ತದೆ. ಐತಿಹಾಸಿಕ ಸ್ಥಳ ಎಂದರೆ, ಹಳೆಯ ಗುಡಿ ಗುಂಡಾರಗಳು ಅಷ್ಟೇ ಅಲ್ಲ ಹಲವಾರು ಊರುಗಳ ಇತಿಹಾಸವನ್ನು ಪರಿಚಯಿಸುವ, ಅಪ್ಪ ಮಗನ ಸಂಭಾಷಣೆಯ ರೂಪದಲ್ಲಿ ಸಂಚಿಕೆಗಳು ಇರುತ್ತವೆ.

Series

Harate Katte

ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ....ಆದ್ರ ....ನಿಮಗ ಹೇಳುದು ಮರತೇನ್ರೀ ...ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ "ಗೌರಿ ಪ್ರಸನ್ನ" ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ....ನೀವು ಕೇಳ್ರಿ...ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ ...... gouri@radiogirmit.com ..... ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ

Serie image

ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯನ್ನು ಮತ್ತು ಕಥೆಗಳಿಂದ ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸಲು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ. ನಿಮ್ಮ ಅನಿಸಿಕೆಗಳನ್ನು uma.bhatkande@radiogirmit.com ಗೆ ಕಳುಹಿಸಿ.

Serie image
Series

Vishayadhare

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ "ಮಹಾನಗರ" ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

Serie image
Series

Bhavapushpa

ಭಾವನೆಗಳು, ಕಲ್ಪನೆಗಳು, ಅನುಭವಗಳು ಅನುಭಾವವಾಗಿ ಹೊರಹೊಮ್ಮುವುದೇ ಕವಿತೆ. ಉದಯೋನ್ಮುಖ ಕವನ ವಾಚನಕಾರರ ಪ್ರೇರಣೆಗಾಗಿಯೇ ಈ ಭಾವಪುಷ್ಪ ಕಾರ್ಯಕ್ರಮ.

Serie image
Series

Gatavaibhava

ಗತವೈಭವ - ಭಾರತದ ಇತಿಹಾಸ ಕುರಿತು ದೇಶಿಯ ಹಾಗೂ ವಿದೇಶಿಯ ಕನ್ನಡ ಪ್ರೇಮಿಗಳಿಗೆ ಕುತೂಹಲ ಉಂಟು ಮಾಡುವ ಏಕೈಕ ಕಾರ್ಯಕ್ರಮ.

Serie image